Home / Media / Digital News

Digital News

PMGSY: ಹಣ ಪೋಲಾಗುವುದನ್ನು ತಪ್ಪಿಸಿದ ಪ್ರಧಾನಿ ಮೋದಿ: ಅನಂತಕುಮಾರ ಹೆಗಡೆ

PMGSY: ಹಣ ಪೋಲಾಗುವುದನ್ನು ತಪ್ಪಿಸಿದ ಪ್ರಧಾನಿ ಮೋದಿ: ಅನಂತಕುಮಾರ ಹೆಗಡೆ

*   ನಮಗೆ ಮತ ನೀಡಲಿ, ಬಿಡಲಿ ಆದರೆ, ಆ ಕ್ಷೇತ್ರ ಅಭಿವೃದ್ಧಿಯಾಗಬೇಕು 
*  ಈಗಾಗಲೇ ಹಲವು ಹಳ್ಳಿಗಳಿಗೆ ಉತ್ತಮ ರಸ್ತೆ ನಿರ್ಮಾಣ
*  ಮೀನುಗಾರಿಕೆಗೆ ನೂರಕ್ಕೂ ಹೆಚ್ಚು ಕಡೆ ಫಿಶ್‌ಲ್ಯಾಂಡಿಗ್‌ ವ್ಯವಸ್ಥೆಗೆ ಸಹ ಕ್ರಮ 

ಗೋಕರ್ಣ(ಜ.20): ನರೇಂದ್ರ ಮೋದಿ(Narendra Modi) ಪ್ರಧಾನಮಂತ್ರಿಯಾದ ಬಳಿಕ ರಾಜಕಾರಣದ ಹೆಸರಿನಲ್ಲಿ ಹಣ ಪೋಲಾಗುವುದು ನಿಂತಿದೆ ಎಂದು ಸಂಸದ ಅನಂತಕುಮಾರ ಹೆಗಡೆ(Anantkumar Hegde) ಹೇಳಿದರು.
ಅವರು ಇಲ್ಲಿನ ನಾಡುಮಾಸ್ಕೇರಿಯಲ್ಲಿ ಕೇಂದ್ರ ಸರ್ಕಾರದ ಗ್ರಾಮ ಸಡಕ್‌ ಯೋಜನೆಯಡಿ(Pradhan Mantri Gram Sadak Yojana) ಗಂಗೆಕೊಳ್ಳದಿಂದ ನಾಡುಮಾಸ್ಕೇರಿಯ ವರೆಗೆ 3 ಕೋಟಿ, 45 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಈ ಮೊದಲು ಕೇಂದ್ರದ ಅನುದಾನವನ್ನು ಹಂಚಿಕೊಳ್ಳುವ ಪದ್ಧತಿ ಇತ್ತು, ಹೀಗೆ ಮಾಡಿದರೆ ಅಭಿವೃದ್ಧಿ ಕಾರ್ಯವಾಗುವುದರ ಬದಲು ರಾಜಕಾರಣಿಗಳು(Politicians) ಅಭಿವೃದ್ಧಿಯಾಗುತ್ತಿದ್ದರು. ಇದಕ್ಕಾಗಿಯೇ ಕೇಂದ್ರ ಸರ್ಕಾರ(Central Government) ಮಾರ್ಗಸೂಚಿ ಪ್ರಕಟಿಸಿ ಅದರಂತೆ ನೇರವಾಗಿ ಜನರಿಗೆ ಸೌಕರ್ಯ ತಲುಪುವಂತೆ ಮಾಡಿದೆ. ಅಭಿವೃದ್ಧಿಯಲ್ಲಿ ರಾಜಕಾರಣ(Politics) ತರಬಾರದು ಎಂದ ಅವರು, ನಮಗೆ ಮತ ನೀಡಲಿ, ಬಿಡಲಿ ಆದರೆ, ಆ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂಬುದೇ ನಮ್ಮ ಸರ್ಕಾರದ ಗುರಿಯಾಗಿದೆ.

 

ಈ ಹಿಂದೆ ಜಿಲ್ಲೆಯಲ್ಲಿ 300 ಕೋಟಿಗೂ ಅಧಿಕ ಹಣ ಈಗಾಗಲೇ ಗ್ರಾಮ ಸಡಕ್‌ ಯೋಜನೆ ಅಡಿ ಮಂಜೂರಿಯಾಗಿದೆ. ಜನಸಂಖ್ಯೆ ಕಡಿಮೆ ಇರುವ ಗುಡ್ಡಾಗಾಡು ಪ್ರದೇಶಕ್ಕೆ ಸಮರ್ಪಕ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲು ತೊಡಕಾಗುತ್ತಿತ್ತು, ಈ ಸಮಸ್ಯೆ ಬಗೆಹರಿಸುವ ಉದ್ದೇಶದಿಂದಲೇ ಗ್ರಾಮ ಸಡಕ ಯೋಜನೆ ರೂಪಗೊಂಡಿದ್ದು, ಈಗಾಗಲೇ ಹಲವು ಹಳ್ಳಿಗಳಿಗೆ ಉತ್ತಮ ರಸ್ತೆ ನಿರ್ಮಾಣವಾಗಿದೆ. ಅನೇಕ ಜನಪರ ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪುವ ಗುರಿಯೊಂದಿಗೆ ರೂಪಿಸಲಾಗಿದೆ. ವಿಶೇಷವಾಗಿ ಗುಡ್ಡಾಗಾಡು ಪ್ರದೇಶಗಳಿಗೆ ರಸ್ತೆ ನಿರ್ಮಾಣಕ್ಕಾಗಿ ಗ್ರಾಮ ಸಡಕ್‌ ಯೋಜನೆ ಪ್ರಯೋಜನಕಾರಿ ಎಂದರು.

ಉತ್ತರ ಕನ್ನಡ(Uttara Kannada). ಜಿಲ್ಲೆ ಆರ್ಥಿಕವಾಗಿ ಅಭಿವೃದ್ಧಿಯಾಗಹೇಕಾದರೆ ಇಲ್ಲಿ ದೊಡ್ಡ , ದೊಡ್ಡ ಉದ್ಯಮಗಳು ಪ್ರಾರಂಭವಾಗಬೇಕು. ಅದರಂತೆ ಬಂದರು, ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಈ ಮೂಲಕ ಇಲ್ಲನ ಸ್ಥಳೀಯರಿಗೆ ಉದ್ಯೋಗದ ಜೊತೆ ಆರ್ಥಿಕ ಸಬಲತೆ ಹೊಂದಲು ಸಾಧ್ಯ. ಮೀನುಗಾರಿಕೆಗೆ ನೂರಕ್ಕೂ ಹೆಚ್ಚು ಕಡೆ ಫಿಶ್‌ಲ್ಯಾಂಡಿಗ್‌ ವ್ಯವಸ್ಥೆಗೆ ಸಹ ಕ್ರಮ ತೆಗದುಕೊಳ್ಳಲಾಗುತ್ತಿದೆ ಎಂದರು.

 

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಅಂದಿನ ಪ್ರಧಾನಿ ದಿ. ಅಟಲಬಿಹಾರಿ ವಾಜಪೇಯಿಯವರ ಗ್ರಾಮೀಣ ಭಾಗದ ರಸ್ತೆಯ ಯೋಜನೆಯ ಕನಸು ಗ್ರಾಮ ಸಡಕ ಆಗಿದ್ದು, ಇಂದಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಜನೆ ಸಹಕಾರಗೊಳ್ಳುತ್ತಿದೆ. ಅಲ್ಲದೇ ಈ ಭಾಗದ ಅನೇಕ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸಂಸದರ ಸಹಾಕರಾವಿದ್ದು, ಇದರಂತೆ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕನಿಷ್ಟ ಇಬ್ಬರು ನುರಿತ ವೈದ್ಯರನ್ನು ನೇಮಕ ಮಾಡಿಕೊಡುವಂತೆ ಕೇಳಿಕೊಂಡರು. ಅಲ್ಲದೆ ಈ ಆಸ್ಪತ್ರೆಗೆ ಸರ್ಕಾರ ಮತ್ತು ದಾನಿಗಳು ಸೇರಿದಂತೆ ವಿವಿಧ ಕಡೆಯವರ ಸಹಾಯದಿಂದ ಆಸ್ಪತ್ರೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ವೈದ್ಯರ ಅವಶ್ಯಕತೆ ಇದೆ ಎಂದರು.

ನಾಡುಮಾಸ್ಕೇರಿ ಗ್ರಾಪಂ ಅಧ್ಯಕ್ಷೆ ಧನಶ್ರೀ ಅಂಕೋಲೆಕರ, ಉಪಾಧ್ಯಕ್ಷ ನಾಗರಾಜ ನಾಯ್ಕ, ಹನೇಹಳ್ಳಿ ಗ್ರಾಪಂ ಅಧ್ಯಕ್ಷೆ ಭಾರತಿ ಗೌಡ, ಉಪಾಧ್ಯಕ್ಷ ಭರತ ಗೌಡ , ಗೋಕರ್ಣ ಗ್ರಾಪಂ ಅಧ್ಯಕ್ಷ ಮಂಜುನಾಥ ಜನ್ನು, ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದ ಕವರಿ, ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ, ಕುಮಟಾ ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪಕ್ಷದ ಮಾಧ್ಯಮ ವಕ್ತಾರ ನಾಗರಾಜ ನಾಯಕ, ಪಕ್ಷದ ಪ್ರಮುಖ ನಾಗರಾಜ ನಾಯಕ ತೊರ್ಕೆ, ಕುಮಟಾ ಮಂಡಲಾಧ್ಯಕ್ಷ ಹೇಮಂತ ಗಾಂವಕರ ಸೇರಿದಂತೆ ಗ್ರಾಪಂ ಸದಸ್ಯರು, ಸ್ಥಳೀಯರು ಮತ್ತು ಬಿಜೆಪಿ ಪ್ರಮುಖರು, ಕಾರ್ಯಕರ್ತ ಇದ್ದರು. ಗ್ರಾಪಂ ಸದಸ್ಯ ರಾಜೇಶ ನಾಯಕ ಸ್ವಾಗತಿಸಿರು. ವಿನಾಯಕ ಕೊಡ್ಲೆಕೆರೆ ವಂದಿಸಿದರು. ಸುಭಾಷ ಕಾರೇಬೈಲ್‌ ನಿರೂಪಿಸಿದರು.

source : https://kannada.asianetnews.com/karnataka-districts/pm-narendra-modi-avoids-to-losing-money-says-mp-anantkumar-hegde-grg-r5zb0a

Related posts